ಉಳ್ಳಾಲ ಎಸ್ ಎಸ್ ಎಫ್ ವತಿಯಿಂದ ಬೃಹತ್ ತಂಶೀತ್ ಕ್ಯಾಂಪ್
ಉಳ್ಳಾಲ : ಸೆಕ್ಟರ್ ಕಾರ್ಯಕಾರಿ ಸಮಿತಿ ಸದಸ್ಯರಿಗಾಗಿ ತಂಶೀತ್ ಕ್ಯಾಂಪ್ ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ನಡೆಯಿತು. ಜಿಎಂ ಖಾಮಿಲ್ ಸಖಾಫಿ ಉಸ್ತಾದರು ನಾಯಕರಿಗೆ ತರಗತಿಗೆ ನಡೆಸಿದರು.
ಕಾರ್ಯಕ್ರಮದಲ್ಲಿ ಸಯ್ಯಿದ್ ಖುಬೈಬ್ ತಂಞಲ್, ಜಿಲ್ಲಾಧ್ಯಕ್ಷ ರಾದ ಮುನೀರ್ ಅಹ್ಮದ್ ಖಮಿಲ್ ಸಖಾಫಿ, ಸೆಕ್ಟರ್ ಉಸ್ತುವಾರಿ ಜಾಫರ್ ಯು ಎಸ್, ಸೆಕ್ಟರ್ ಅಧ್ಯಕ್ಷ ಜಾಬಿರ್ ಉಸ್ತಾದ್ , ಕೋಶಾಧಿಕಾರಿ ಮುಈನ್ ಅಂಜದಿ , ಡಿವಿಷನ್ ಕೋಶಾಧಿಕಾರಿ ಹಮ್ಜಾ ಯುಬಿ, ಮತ್ತಿತರರು ಉಪ್ಥಿತರಿದ್ದರು.
ಕೊನೆಯಲ್ಲಿ ದಾರುಲ್ ಮುಸ್ತಫ ಮೊರಲ್ ಅಕಾಡೆಮಿ ಇದರ ಪೋಸ್ಟರ್ ಪ್ರದರ್ಶನ ಮಾಡಲಾಯಿತು . ಪ್ರಧಾನ ಕಾರ್ಯದರ್ಶಿ ಹಾಶೀರ್ ಕೋಡಿ ವಂದಿಸಿದರು.
Next Story