ಸಂಧ್ಯಾ ಕಾಲೇಜಿನಲ್ಲಿ ’ಹೋನಿಂಗ್ ಇಂಗ್ಲಿಷ್ ಸ್ಕಿಲ್ಸ್’ ಕಾರ್ಯಗಾರ
ಮಂಗಳೂರು, ಮಾ. 7: ನಗರದ ಮಂಗಳೂರು ವಿವಿ ಸಂಧ್ಯಾ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ‘ಹೋನಿಂಗ್ ಇಂಗ್ಲಿಷ್ ಸ್ಕಿಲ್ಸ್’ ಎಂಬ ವಿಶೇಷ ಕಾರ್ಯಗಾರವು ಶನಿವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ನಂದ ಕಿಶೋರ್ ಎಸ್.ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಇಂಗ್ಲಿಷ್ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಶ್ಯಾಮ್ ಭಟ್ ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಣಿ ಶ್ರೀವತ್ಸ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಂ.ಕಾಂ. ಹಾಗೂ ಎಂ.ಬಿ.ಎ. ವಿಭಾಗದ ಸಂಯೋಜಕರಾದ ಡಾ. ಜಗದೀಶ್ ಬಿ. ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಅಕ್ಷತಾ ಸ್ವಾಗತಿಸಿದರು. ವಿದ್ಯಾರ್ಥಿ ಅಮೀರ್ ಪಿ.ಎಫ್. ವಂದಿಸಿದರು. ರಂಜಿತ್ ಮತ್ತು ತಂಡ ಪ್ರಾರ್ಥಿಸಿದರು. ಯಶ್ವಂತ್ ರಸ್ಕಿನ್ಹಾ ಕಾರ್ಯಕ್ರಮ ನಿರೂಪಿಸಿದರು
Next Story