ಮೂಡಬಿದ್ರೆ : ಮಾ.31ರಂದು ಯುನಿವೆಫ್ ನಿಂದ "ಯುವಕರ ಸಮಾಗಮ"
ಮೂಡಬಿದ್ರೆ : ಯುನಿವೆಫ್ ಕರ್ನಾಟಕ ದ.ಕ. ಜಿಲ್ಲಾ ಘಟಕದ ವತಿಯಿಂದ ಮಾ.31ರ ಸಂಜೆ 4.45 ಗಂಟೆಗೆ ಮೂಡಬಿದ್ರೆ ಕೋಟೆಬಾಗಿಲಿನ ನೂರ್ ಮೊಹಲ್ಲಾದ ಶಮೀ ಕಾಟೇಜ್ ನಲ್ಲಿರುವ ನೂರುಲ್ ಹುದಾ ಮದ್ರಸದಲ್ಲಿ "ಯುವಕರ ಸಮಾಗಮ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ "ಮುಸ್ಲಿಂ ಸಮುದಾಯ-ಭೂತ, ವರ್ತಮಾನ ಮತ್ತು ಭವಿಷ್ಯ" ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರಿಂದ ಯುವ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ಮೂಡಬಿದ್ರೆ ಪರಿಸರದ ಯುವಕರನ್ನು ಇದಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 8310598907 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story