ನಾಟೆಕಲ್ ಮುಸ್ಲಿಂ ವಸತಿ ಶಾಲೆಯಲ್ಲಿ ಅಬೂಬಕರ್ ತುಂಬೆ ಅನುಸ್ಮರಣೆ
ನಾಟೆಕಲ್, ಮಾ.31: ಇಲ್ಲಿನ ಮುಸ್ಲಿಂ ವಸತಿ ಶಾಲೆಯಲ್ಲಿ ಇತ್ತೀಚೆಗೆ ಅಗಲಿದ ರಾಸ್ ಅಲ್ ಖೈಮಾದ ಪ್ರೊ. ಅಬೂಬಕರ್ ತುಂಬೆ ಅವರ ಅನುಸ್ಮರಣೆ ನಡೆಯಿತು.
ದಿವಂಗತರ ಜೀವನ ಶೈಲಿ, ಅವರ ಆದರ್ಶ ನಮಗೆ ಮಾರ್ಗದರ್ಶನವಾಗಬೇಕು ಎಂದು ಪ್ರಾಂಶುಪಾಲ ಉಮರ್ ಮಾಸ್ಟರ್ ಹೇಳಿದರು.
ಈ ಸಂದರ್ಭ ಸಂಸ್ಥೆಯ ನೌಕರರಾದ ಮಾಶೂಕ್, ಶೋಭಾ, ವಿನೂತ, ನಿಶಾ, ಹಸೀನ ಬಾನು, ಅಬ್ದುಲ್ ಮಜೀದ್, ಹಸನಬ್ಬ, ಅನ್ವರ್, ಟಿ.ಎಸ್ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.
Next Story