ಫರಂಗಿಪೇಟೆ: 108 ಆಂಬುಲೆನ್ಸ್ ನಲ್ಲಿ ಹೆಣ್ಣು ಶಿಶುಗೆ ಜನ್ಮ ನೀಡಿದ ಮಹಿಳೆ
ಬಂಟ್ವಾಳ, ಎ.11: ಫರಂಗಿಪೇಟೆಯ 108 ಆಂಬುಲೆನ್ಸ್ ನಲ್ಲಿ ರವಿವಾರ ಮಹಿಳೆಯೊಬ್ಬರು ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಮಹಿಳೆಯೊಬ್ಬರು ಹೆರಿಗೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ವೈದ್ಯರಿಲ್ಲ ಎಂದು ಮಂಗಳೂರಿಗೆ ಕಳುಹಿಸಲಾಗಿತ್ತು.
ಪುತ್ತೂರಿನಿಂದ ಆಂಬುಲೆನ್ಸ್ ಒಂದರಲ್ಲಿ ಬಂದ ಮಹಿಳೆಯನ್ನು ಬಂಟ್ವಾಳ ಟೋಲ್ ಗೇಟ್ ಸಮೀಪ ಫರಂಗಿಪೇಟೆಯ 108 ಆಂಬುಲೆನ್ಸ್ ಗೆ ವರ್ಗಾಯಿಸಲಾಯಿತು. ಆದರೆ ಆಂಬುಲೆನ್ಸ್ ಮಂಗಳೂರು ತಲುಪುವ ಮೊದಲೇ ನೋವಿನಿಂದ ನರಳುತ್ತಿರುವ ಮಹಿಳೆಯನ್ನು ಕಂಡ 108 ಟೆಕ್ನಿಶಿಯನ್ ಕೇಶವ ಅವರು ಹೆರಿಗೆ ಮಾಡಿಸಿದ್ದಾರೆ.
ಆರೋಗ್ಯವಂತ ಶಿಶು ಹಾಗೂ ತಾಯಿಯನ್ನು ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಬುಲೆನ್ಸ್ ನಲ್ಲಿದ್ದ ವೆಂಕಣ್ಣ ಗೌಡ ಸಹಕರಿಸಿದರು.
Next Story