ಹಾಜಿರಾ ಸಜಿನಿಗೆ ಡಾಕ್ಟರೇಟ್
ಮಂಗಳೂರು, ಎ.15: ಕರ್ನಾಟಕ ಸರಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಭೂ ವಿಜ್ಞಾನಿಯಾಗಿ ಉಡುಪಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಜಿರಾ ಸಜಿನಿ ಎಸ್. ಸಲ್ಲಿಸಿರುವ 'An Intergrated Hydroglogical Investigation of Sullia Taluk' ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.
ಪ್ರೊಫೆಸರ್ ಡಾ.ಶಿವಣ್ಣ ಮಾರ್ಗದರ್ಶನದಲ್ಲಿ ಅವರು ಈ ಪ್ರಬಂಧವನ್ನು ಮಂಡಿಸಿದ್ದಾರೆ.
ಹಾಜಿರಾ ಸಜಿನಿ ಅವರು ಬೆಳ್ತಂಗಡಿ ಮನ್ಶರ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ನ ಪ್ರಾಂಶುಪಾಲ ಕಡಬ - ಮರ್ದಾಳ ನಿವಾಸಿ ಹೈದರ್ ರ ಪತ್ನಿ.
Next Story