ಭಟ್ಕಳ: ಗುಡುಗು ಸಹಿತ ಗಾಳಿ ಮಳೆ; ಹೆಸ್ಕಾಂ ಇಲಾಖೆಗೆ 2.25 ಲಕ್ಷ ರೂ. ಹಾನಿ
ಭಟ್ಕಳ: ಮಂಗಳವಾರ ಹಾಗೂ ಬುಧವಾರ ರಾತ್ರಿ ಗುಡುಗು ಮಿಂಚುಗಳಿಂದ ಕೂಡಿದ ಮಳೆಯಿಂದಾಗಿ ಭಟ್ಕಳ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಹಲವು ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದ್ದು, ಸುಮಾರು 2.25 ಲಕ್ಷ ರೂ. ಹಾನಿ ಸಂಭವಿಸಿದೆ ಎಂದು ಭಟ್ಕಳ ಹೆಸ್ಕಾಂ ಇಲಾಖೆಯ ಅಭಿಯಂತರರು ಮಾಹಿತಿ ನೀಡಿದ್ದಾರೆ.
ಭಟ್ಕಳದ ಶಾಖೆಯ ಹಾಡುವಳ್ಳಿ, ಹೆಜ್ಜಿಲು, ಹೇರ್ಬಡ್ಕಿ, ಗಂಜಿಗೇರಿ, ಗೋರ್ಟೆ ಗಡಿ,ಚಿತ್ರಾಪುರ ಒಟ್ಟು 8 ಪರಿವರ್ತಕಗಳು ವಿಫಲವಾಗಿವೆ ಹಾಗೂ 5 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಎಇಇ ಮಂಜುನಾಥ್ ನಾಯ್ಕ ನೇತೃತ್ವದ ತಂಡ ಹಾನಿಯನ್ನು ಗುರುತಿಸಿ ಸಲಕರಣೆಗಳನ್ನು ಬದಲಿಸಲು ಪರಿಶ್ರಮವಹಿಸಿದೆ. ಭಟ್ಕಳ ವಿಭಾಗಕ್ಕೆ ಒಟ್ಟು 2.25ಲಕ್ಷ ಹಾನಿಯಾಗಿದೆ ಎನ್ನಲಾಗಿದೆ.
Next Story