ಕರಾವಳಿಯಲ್ಲಿ ಎ.22ರವರೆಗೆ ಮಳೆ ಸಾಧ್ಯತೆ
ಮಂಗಳೂರು, ಎ.17: ಕರ್ನಾಟಕ ಕರಾವಳಿಯಲ್ಲಿ ರಾತ್ರಿ ಹೊತ್ತು ಕೆಲವೆಡೆ ಭಾರೀ ಮತ್ತು ಹಲವೆಡೆ ಸಾಧಾರಣ ಮಳೆಯು ಎ.22ರವರೆಗೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.
ಸದ್ಯ ಕರಾವಳಿಯಲ್ಲಿ ಹಗಲು ಹೊತ್ತು ಉರಿ ಬಿಸಿಲಿನ ಸೆಕೆಯಾದರೆ ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ಮತ್ತು ರಾತ್ರಿ ಸಾಧಾರಣ ಮತ್ತು ಭಾರೀ ಮಳೆಯಾಗುತ್ತಿದೆ. ಶುಕ್ರವಾರ ತಡರಾತ್ರಿ ಹಲವೆಡೆ ಮಳೆಯಾಗಿದೆ. ಶನಿವಾರವೂ ಕೆಲವೆಡೆ ಮಳೆಯಾಗಿದೆ. ಇದೇ ರೀತಿಯ ವಾತಾವರಣವು ಎ.22ರವರೆಗೆ ಮುಂದುವರಿಯಲಿದೆ.
ಶನಿವಾರ ಸಂಜೆ ಹೊತ್ತು ಮೋಡ ಕವಿದ ವಾತಾವರಣದ ಜತೆಗೆ ಗಾಳಿ, ಸಿಡಿಲಿನೊಂದಿಗೆ ಸಾಧಾರಣ ಮಳೆಯಾಗಿದೆ. ನಗರ ಪ್ರದೇಶದಲ್ಲಿ ಸಾಧಾರಣ ಮತ್ತು ಗ್ರಾಮೀಣ ಭಾಗದಲ್ಲಿ ಸ್ವಲ್ಪ ಜಾಸ್ತಿಯೇ ಮಳೆಯಾಗಿದೆ.
Next Story