ಮಣಿಪಾಲ: ಮನೆಗೆ ನುಗ್ಗಿ ನಗ ನಗದು ಕಳವು
ಮಣಿಪಾಲ, ಎ.18: ಅಲೆವೂರು ಗುಡ್ಡೆಯಂಗಡಿಯ ದೇಶಿಂಗಬೆಟ್ಟು ಎಂಬಲ್ಲಿ ಎ.16ರಂದು ರಾತ್ರಿ ವೇಳೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ನಗ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಗಣೇಶ್ ಕುಲಾಲ್ ಎಂಬವರ ಮನೆಯ ಮಾಡಿನ ಹೆಂಚನ್ನು ತೆಗೆದು ಒಳಗೆ ಪ್ರವೇಶಿಸಿದ ಕಳ್ಳರು, ಮನೆಯ ಕಪಾಟಿನ ಲಾಕರ್ನಲ್ಲಿಟ್ಟಿದ 1,38,000ರೂ. ವೌಲ್ಯದ 46 ಗ್ರಾಂ ಚಿನ್ನಾಭರಣ ಹಾಗೂ 3000ರೂ. ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 1,41,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story