ಚಿನ್ನ ಅಕ್ರಮ ಸಾಗಾಟ ಪತ್ತೆ
ಮಂಗಳೂರು, ಎ. 19: ದುಬೈನಿಂದ ಆಟಿಕೆಗಳು, ಟ್ರಿಮ್ಮರ್, ವಾಟರ್ ಡಿಸ್ಪೆನ್ಸರ್, ಜ್ಯೂಸರ್ಗಳಲ್ಲಿ ಬಚ್ಚಿಟ್ಟು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಏರ್ ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ಪತ್ತೆ ಹಚ್ಚಿದ್ದಾರೆ.
ಬಂಟ್ವಾಳದ ಹಾರಿಸ್ ಎಂಬಾತ 14.55 ಲ.ರೂ. ವೌಲ್ಯದ 300 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಈತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story