ಬಲ್ಮಠ: ಮೈ ಲೈಫ್ ಮೆಡಿಕಲ್ ಸೆಂಟರ್ ನ ಕ್ಲಿನಿಕ್, ಫಾರ್ಮಸಿ ಮತ್ತು ಲ್ಯಾಬೊರೇಟರಿ ಕಾರ್ಯಾರಂಭ
ಮಂಗಳೂರು, ಎ.19: ಮೈ ಲೈಫ್ ಮೆಡಿಕಲ್ ಸೆಂಟರ್ ನ ಕ್ಲಿನಿಕ್, ಫಾರ್ಮಸಿ ಮತ್ತು ಲ್ಯಾಬೊರೇಟರಿ ಇದೀಗ ಮಂಗಳೂರಿನ ಬಲ್ಮಠದಲ್ಲಿ ಕಾರ್ಯಾಚರಿಸುತ್ತಿದೆ. ಲ್ಯಾಬೊರೇಟರಿಯಲ್ಲಿ ವಿದೇಶಗಳಿಗೆ ತೆರಳುವವರಿಗೆ, ವಿದ್ಯಾರ್ಥಿಗಳಿಗೆ ಮತ್ತು ಡೊಮೆಸ್ಟಿಕ್ ಪ್ರಯಾಣಿಕರಿಗೆ ಮತ್ತು ಇತರ ಅವಶ್ಯಕತೆಗಳಿಗೆ ಅನುಗುಣವಾಗಿ ಆಕರ್ಷಕ ಬೆಲೆಯಲ್ಲಿ ಕೋವಿಡ್ ಪರೀಕ್ಷೆಯನ್ನೂ ಕೂಡಾ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಸಂಸ್ಥೆಯಲ್ಲಿ ಮೆಡಿಕಲ್ ಫಾರ್ಮಸಿ ವಸ್ತುಗಳಿಗೆ 10 ಶೇಕಡ ಮತ್ತು ಲ್ಯಾಬ್ ಪರೀಕ್ಷೆಗಳಲ್ಲಿ 20 ಶೇಕಡ ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಸಂಸ್ಥೆಯು ಕಳೆದ 25 ವರ್ಷಗಳಿಂದ ಅಂತಾರಾಷ್ಟ್ರೀಯ ವೀಸಾ, ಟಿಕೆಟ್, ಅಟೆಸ್ಟೇಶನ್ ಮತ್ತು ಇನ್ನಿತರ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು. ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ಗ್ರಾಹಕರಿಗೆ ಒದಗಿಸಿ ಕೊಡುವುದು ನಮ್ಮ ಧ್ಯೇಯೋದ್ದೇಶ ಎಂದು ಸಂಸ್ಥೆಯ ಮುಖ್ಯಸ್ಥ ಅಶ್ರಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story