ವಿಟ್ಲ: 20 ಅಡಿ ಆಳಕ್ಕೆ ಉರುಳಿದ ಸ್ಕೂಟರ್; ಮಹಿಳೆ ಪಾರು
ಸ್ಕೂಟರ್ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬಂಟ್ವಾಳ : ಚಾಲಕಿಯ ನಿಯಂತ್ರಣ ಕಳೆದು ರಸ್ತೆ ಬದಿಯಲ್ಲಿರುವ 20 ಅಡಿ ಆಳದ ಹೊಂಡಕ್ಕೆ ಸ್ಕೂಟರ್ ಉರುಳಿ ಬಿದ್ದಿರುವ ಘಟನೆ ವಿಟ್ಲದ ಕಾಶಿಮಠದಲ್ಲಿ ಮಂಗಳವಾರ ನಡೆದಿದೆ. ಸ್ಕೂಟರ್ ಚಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಉಕ್ಕುಡ ನಿವಾಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸ್ಕೂಟರ್ ಚಾಲಕಿ ಮೋಹಿನಿ ಎಂಬವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಅವರು ಉಕ್ಕುಡ ಕಡೆಯಿಂದ ವಿಟ್ಲ ಕಡೆಗೆ ಹೋಗುತ್ತಿದ್ದಾಗ ಸ್ಕೂಟರ್ ಕಾಶಿಮಠ ತಿರುವಿನಲ್ಲಿರುವ ಅಪಾಯಕಾರಿ ಹೊಂಡಕ್ಕೆ ಉರುಳಿದೆ. ತಕ್ಷಣವೇ ಸ್ಥಳೀಯರು ಮೋಹಿನಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆಯ ವೀಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Next Story