ಗುರುಪುರ : ಮಾಸ್ಕ್ ಧರಿಸದವರಿಂದ ದಂಡ ವಸೂಲಿ
ಗುರುಪುರ, ಮೇ 7: ರಾಜ್ಯ ಸರಕಾರದ ಆದೇಶ ಉಲ್ಲಂಘಿಸಿ ತಿರುಗಾಡುವವರ ವಿರುದ್ಧ ಗುರುಪುರ ಗ್ರಾಪಂ ‘ಟಾಸ್ಕ್ ಫೋರ್ಸ್’ ತಂಡವು ಶುಕ್ರವಾರದಿಂದಲೇ ಕಾರ್ಯಾಚರಣೆ ಆರಂಭಿಸಿದೆ. ಅದರಂತೆ ಮಾಸ್ಕ್ ಧರಿಸದ ವ್ಯಕ್ತಿಗಳಿಂದ ದಂಡ ವಸೂಲಿ ಮಾಡಿತು. ಅಲ್ಲದೆ ಕೋವಿಡ್-19 ಜನಜಾಗೃತಿ, ದಂಡ ಹೇರಿಕೆ ಬಗ್ಗೆ ಮೈಕ್ ಮೂಲಕ ಮಾಹಿತಿ ಪ್ರಸಾರ ಮಾಡಲಾಯಿತು.
ಪಿಡಿಒ ಅಬೂಬಕರ್ ನೇತೃತ್ವದ ತಂಡವು ಗ್ರಾಪಂನ ಮೂಳೂರು ಮತ್ತು ಅಡ್ಡೂರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತು.
Next Story