ಕಾಸರಗೋಡು: ಬೈಕ್ ಗಳ ನಡುವೆ ಅಪಘಾತ; ಓರ್ವ ಮೃತ್ಯು
ಅಬ್ದುಲ್ ರಝಾಕ್
ಕಾಸರಗೋಡು : ಬೈಕ್ ಗಳ ನಡುವೆ ಉಂಟಾದ ಅಪಘಾತದಲ್ಲಿ ಗಲ್ಫ್ ಉದ್ಯೋಗಿ ಮೃತಪಟ್ಟ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ.
ಬದಿಯಡ್ಕ ಕನ್ಯಾನದ ಅಬ್ದುಲ್ ರಝಾಕ್ (32) ಮೃತಪಟ್ಟವರು. ಇನ್ನೋರ್ವ ಸವಾರ ಕುಂಬ್ಡಾಜೆಯ ಸಂಜೀವ (25) ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ರವಿವಾರ ರಾತ್ರಿ ಬದಿಯಡ್ಕ ಸಮೀಪದ ಪಿಲಾಂಕಟ್ಟೆ ಮಿಲ್ಲ್ ಸಮೀಪ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಕಾಸರಗೋಡು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿಗೆ ಕೊಂಡೊಯ್ದರೂ ರಝಾಕ್ ಅವರ ಜೀವ ಉಳಿಸಲಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬದಿಯಡ್ಕ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story