ಬಿ.ಸಿ.ರೋಡ್ : ಖಝಾನಾ ಹಾಲ್ ಮಾಲಕ ಹಾಜಿ ಅಬ್ದುಲ್ ಖಾದರ್ ನಿಧನ
ಮಂಗಳೂರು, ಮೇ 29: ನಗರದ ಬೋಳಾರದ ದಿ. ಹಸನಬ್ಬ ಅವರ ಪುತ್ರ, ಉದ್ಯಮಿ, ಬಿ.ಸಿ.ರೋಡ್ ತಲಪಾಡಿ ನಿವಾಸಿ ಹಾಜಿ ಅಬ್ದುಲ್ ಖಾದರ್ (70) ಶನಿವಾರ ಮುಂಜಾನೆ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಬಿ.ಸಿ.ರೋಡ್ನ ಖಝಾನಾ ಹಾಲ್ ಮತ್ತು ನಗರದ ಬಂದರ್ನ ಮ್ಯಾಕ್ ಮೆರೈನ್ ಪ್ರೊಡಕ್ಟ್ ಕಂಪನಿಯ ಮಾಲಕರಾಗಿದ್ದ ಅವರು ಮಂಗಳೂರಿನ ಸೀ ಫುಡ್ ಬೈಯರ್ಸ್ ಅಸೋಸಿಯೇಷನ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಿ.ಸಿ.ರೋಡ್ ತಲಪಾಡಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿಯೂ ಹಾಗೂ ಹಲವು ಸಾಮಾಜಿಕ ಸಂಘಟನೆಗಳಲ್ಲೂ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದಾರೆ.
Next Story