ಗಂಜಿಮಠ ಪಿಡಿಒ ಹಸನಬ್ಬರಿಗೆ ಸನ್ಮಾನ
ಗುರುಪುರ, ಮೇ 31: ಕಳೆದ ವಾರ ನಿವೃತ್ತರಾದ ಗಂಜಿಮಠ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಸನಬ್ಬ ಅವರಿಗೆ ಸೋಮವಾರ ಗ್ರಾಪಂ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಕುಮುದಾ ನಾಕ್, ಜಿಪಂ ಮಾಜಿ ಸದಸ್ಯ ಯುಪಿ ಇಬ್ರಾಹಿಂ, ಉಪ ತಹಶೀಲ್ದಾರ್ ಶಿವಪ್ರಸಾದ್, ಕಂದಾಯ ನಿರೀಕ್ಷಕ ನವನೀತ ಮಾಳವ, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತ್ ರಾಜ್, ಕಂದಾವರ ಗ್ರಾಮ ಕರಣಿಕ, ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Next Story