ಟಿ.ಎಂ. ಅಬ್ಬಾಸ್ ನಿಧನ
ಉಳ್ಳಾಲ, ಜೂ.3: ತಲಪಾಡಿ ಸಮೀಪದ ಕೆ.ಸಿ. ನಗರ ನಿವಾಸಿ ಟಿ.ಎಂ.ಅಬ್ಬಾಸ್ (73) ದೀರ್ಘಕಾಲದ ಅಸೌಖ್ಯದಿಂದ ಬುಧವಾರ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಐವರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ತಲಪಾಡಿ ವಿದ್ಯಾನಗರದ ಫಲಾಹ್ ವಿದ್ಯಾ ಸಂಸ್ಥೆಯ ಸ್ಥಾಪಕ ಸದಸ್ಯರಾಗಿದ್ದ ಅವರು ಬಳಿಕ ಹಲವು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ತಲಪಾಡಿಯ ಅಬ್ರಾರ್ ಮಸ್ಜಿದ್ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು.
ಸಂತಾಪ: ಮೃತರ ನಿಧನಕ್ಕೆ ಫಲಾಹ್ ವಿದ್ಯಾಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಸಂತಾಪ ಸೂಚಿಸಿದ್ದಾರೆ.
Next Story