ಮಂಗಳೂರು : ಸಿಇಟಿ, ನಾಟಾ ಆಕಾಂಕ್ಷಿಗಳಿಗೆ 'ಬಿಐಟಿ' ಯಿಂದ ಉಚಿತ ಆನ್ಲೈನ್ ತರಬೇತಿ
ಮಂಗಳೂರು : ಸಿಇಟಿ ಮತ್ತು ನಾಟಾ 2021ಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳು ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಒದಗಿಸುವ ಉಚಿತ ಆನ್ಲೈನ್ ತರಬೇತಿಯ ಸಹಾಯದಿಂದ ಪರೀಕ್ಷೆಗಳಿಗೆ ತಯಾರಿ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.
2021ರ ಜೂನ್ 20ರಿಂದ ಆನ್ಲೈನ್ ಕೋಚಿಂಗ್ ಪ್ರಾರಂಭವಾಗಲಿದೆ. ವಿಷಯದ ತಜ್ಞರು ಪ್ರತಿದಿನ ಎರಡು ಗಂಟೆಗಳ ಕಾಲ ತರಗತಿ ನೀಡಲಿದ್ದಾರೆ.
ಸಿಇಟಿ / ನಾಟಾ ಪ್ರಾಕ್ಟೀಸ್ ಮತ್ತು ಅಣಕು ಪರೀಕ್ಷೆ, ಯಾವುದೇ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯನ್ನು ಸುಲಭವಾಗಿ ಪರಿಹರಿಸಲು ಅನನ್ಯವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಹೆಚ್ಚಿನ ವಿವರಗಳಿಗಾಗಿ ಮೊ: 9900066888/7259661177 ಅಥವಾ admissions@bitmangalore.edu.in ಅನ್ನು ಸಂಪರ್ಕಿಸಬಹುದು.
Next Story