ಜೂ.14-21: ಬೆಳ್ತಂಗಡಿಯ 8 ಗ್ರಾಮಗಳು ಸೀಲ್ಡೌನ್
ಬೆಳ್ತಂಗಡಿ: ತಾಲೂಕಿನಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಡಳಿತ ತಾಲೂಕಿನ ಎಂಟು ಗ್ರಾಮ ಪಂಚಾಯತ್ ಗಳನ್ನು ಜೂನ್ 14ರಿಂದ 21ರವರೆಗೆ ಸಂಪೂರ್ಣವಾಗಿ ಸೀಲ್ಡೌನ್ ಮಾಡಲು ಸೂಚನೆ ನೀಡಿದೆ.
ತಾಲೂಕಿನ ನೆರಿಯ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ಲಾಯಿಲ, ಉಜಿರೆ, ಚಾರ್ಮಾಡಿ ಪಂಚಾಯತ್ ಸೋಮವಾರದಿಂದ ಸೀಲ್ಡೌನ್ ಆಗಲಿದೆ. ತಾಲೂಕಿನಲ್ಲಿ 50ಕ್ಕಿಂತ ಹೆಚ್ಚು ಸಕ್ರಿಯ ಕೊರೋನ ಪ್ರಕರಣಗಳಿರುವ ಗ್ರಾಮ ಪಂಚಾಯತುಗಳನ್ನು ಸೀಲ್ಡೌನ್ ಮಾಡಲು ಜಿಲ್ಲಾಡಳಿತ ಸೂಚಿಸಿದೆ.
Next Story