ಕೋಳಿ ಸಾಗಾಟದ ಲಾರಿ ಪಲ್ಟಿ
ಬಂಟ್ವಾಳ, ಜೂ.19: ವಿಟ್ಲ ಪೆರುವಾಯಿಯಿಂದ ಬೆರಿಪ್ಪದವು ಕಡೆಗೆ ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಶನಿವಾರ ಪೆರುವಾಯಿ ಸೇತುವೆ ಬಳಿ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ.
ಪೆರುವಾಯಿ ಸಂಕ ಕಿರಿದಾದ್ದು ಇದಕ್ಕೂ ಮೊದಲು ಇಳಿಜಾರು ಪ್ರದೇಶವಾದ್ದರಿಂದ ಪಿಕಪ್ ಗೆ ಬ್ರೇಕ್ ಸಮಸ್ಯೆ ಯಾಗಿ ಸಂಕದ ಎದುರು ಭಾಗದಲ್ಲಿ ಅಡ್ಡಲಾಗಿ ಉರುಳಿ ಬಿದ್ದಿದೆ.
ಪಿಕಪ್ ಚಾಲಕನ ಕೈಗೆ ತೀವ್ರವಾಗ ಗಾಯವಾಗಿದ್ದು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಿಕಪ್ ನಲ್ಲಿದ್ದ ಹೆಚ್ಚಿನ ಕೋಳಿಗಳು ಸತ್ತಿದ್ದು ಕೆಲವು ಕೋಳಿಗಳು ಸ್ಥಳೀಯರ ಪಾಲಾಗಿದೆ. ಸ್ಥಳೀಯರ ನೆರವಿನೊಂದಿಗೆ ಪಿಕಪ್ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
Next Story