ವಿಕಲಚೇತನ ಪದವೀಧರರಿಗೆ ನೇಮಕಾತಿ ಅಭಿಯಾನ
ಉಡುಪಿ, ಜು.16: ಇನ್ಫೋಸಿಸ್ ಬಿಪಿಎಂ ಸಂಸ್ಥೆಯ ವತಿಯಿಂದ ಬೆಂಗಳೂರು, ಮೈಸೂರು, ಚೆನ್ನೈ, ಹೈದ್ರಾಬಾದ್ ಮತ್ತು ಪುಣೆ ನಗರಗಳ ಬಿಪಿಓ ಗಳಲ್ಲಿ ಸಿಎಸ್ಆರ್ ಮತ್ತು ಡೈವರ್ಸಿಟಿ ಯೋಜನೆ ಅಡಿಯಲ್ಲಿ ಕಾರ್ಯ ನಿರ್ವಹಿಸಲು ವಿಕಲಚೇತನ ಪದವೀಧರ ಅಭ್ಯರ್ಥಿಗಳಿಗೆ ನೇಮಕಾತಿ ಡ್ರೈವ್ ಅನ್ನು ಹಮ್ಮಿಕೊಳ್ಳಲಾಗಿದೆ.
ಪದವಿ ಪಡೆದಿರುವ ಹಾಗೂ 2 ವರ್ಷಗಳ ಅನುಭವ ಹೊಂದಿರುವ, ಮೂಳೆ ವೈಫಲ್ಯ, ಕುಬ್ಜ ಹಾಗೂ ಆಸಿಡ್ ದಾಳಿಯಿಂದ ಪಾರಾದ ವಿಕಲಚೇತನ ಪದವೀಧರ ಅಭ್ಯರ್ಥಿಗಳು ಡ್ರೈವ್ನಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಉಡುಪಿ ದೂರವಾಣಿ ಸಂಖ್ಯೆ:0820-2574869, ಮೊ.ನಂ: 9945856670ನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story