ಎರ್ಮಾಳಿನಲ್ಲಿ ಸರಣಿ ಅಪಘಾತ: ಮೂವರಿಗೆ ಗಾಯ
ಪಡುಬಿದ್ರಿ : ಮೂರು ವಾಹನಗಳ ನಡುವೆ ಸರಣಿ ಅಪಘಾತ ನಡೆದು ರಿಕ್ಷಾ ಚಾಲಕ ಸಹಿತ ಮೂವರು ಗಾಯಗೊಂಡ ಘಟನೆ ಪಡುಬಿದ್ರಿ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ತೆಂಕ ಎರ್ಮಾಳು ಗರಡಿ ಬಳಿ ಸಂಭವಿಸಿದೆ.
ತೆಂಕ ಎರ್ಮಾಳು ಗರಡಿ ಬಳಿ ಪಡುಬಿದ್ರಿಯತ್ತ ಚಲಿಸುತ್ತಿದ್ದ ಆಟೋ ರಿಕ್ಷಕ್ಕೆ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಯಾಗಿದೆ. ಪರಿಣಾಮ ರಿಕ್ಷಾ ಕಮರಿಗೆ ಉರುಳಿದೆ. ಇದೇ ವೇಳೆ ಮಂಗಳೂರಿನತ್ತ ಚಲಿಸುತ್ತಿದ್ದ ಮತ್ತೊಂದು ಕಾರು ಅಪಘಾತಕ್ಕೀಡಾದ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮೂರೂ ವಾಹನಗಳು ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಮುಲ್ಕಿ ನಿವಾಸಿ ರಾಜೇಶ್ ಸಹಿತ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದು, ಮೂರು ವಾಹನ ಜಖಂ ಗೊಂಡಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.
Next Story