ಜು.26ರಂದು ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಲಭ್ಯತೆ
ಉಡುಪಿ, ಜು.25: ಜಿಲ್ಲೆಯ ಕೊರೋನ ಮುಂಚೂಣಿ ಕಾರ್ಯಕರ್ತರು/ದುರ್ಬಲ, ಗುಂಪಿನ ಫಲಾನುಭವಿಗಳು/ಆದ್ಯತಾ ಗುಂಪಿನವರು ಮತ್ತು ಆರೋಗ್ಯ ಕಾರ್ಯಕರ್ತರು/ ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರುಗಳಿಗೆ ಹಾಗೂ 45ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ, ವಿಕಲಚೇತನರಿಗೆ ಮತ್ತು ಅವರ ಆರೈಕೆ ದಾರರಿಗೆ ಮತ್ತು ಎಸ್ಎಎಂ, ಎಂಎಎಂ ಮಕ್ಕಳ ಆರೈಕೆದಾರರಿಗೆ ಜು.26ರಂದು ಕೋವಿಡ್-19 ಪ್ರಥಮ ಮ್ತು 2ನೇ ಡೋಸ್ ಲಸಿಕೆ ಲಭ್ಯ ಇದೆ.
ಅಜ್ಜರಕಾಡು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ(ಜಿಲ್ಲಾಸ್ಪತ್ರೆಯ ಹಿಂಭಾಗ)ದಲ್ಲಿ ಕೋವಿಶೀಲ್ಡ್ 1ನೇ ಮತ್ತು 2ನೇ ಡೋಸ್(150), ಮಣಿಪಾಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (ಮಣಿಪಾಲ ಮಾಧವ ಕೃಪಾ ಶಾಲೆ)ದಲ್ಲಿ ಕೋವಿಶೀಲ್ಡ್ 1ನೆ ಮತ್ತು 2ನೆ ಡೋಸ್(200), ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ(ಆದಿಉಡುಪಿ ಖಾಸಗಿ ಪ್ರಾಥಮಿಕ ಶಾಲೆ)ಯಲ್ಲಿ ಕೋವಿಶೀಲ್ಡ್ 1ನೆ ಮತ್ತು 2ನೆ ಡೋಸ್ (200), ಕುಕ್ಕಿಕಟ್ಟೆ ಎಫ್.ಪಿ.ಎ.ಐ.(ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ)ಯಲ್ಲಿ ಕೋವಿಶೀಲ್ಡ್ 1ನೇ ಮತ್ತು 2ನೇ ಡೋಸ್(150) ಮತ್ತು ಕೋವ್ಯಾಕ್ಸಿನ್ 2ನೆ ಡೋಸ್(30), ಉಡುಪಿ ಸರಕಾರಿ ತಾಯಿ ಮತ್ತು ಮಕ್ಕಳ(ಬಿ.ಆರ್.ಎಸ್) ಆಸ್ಪತ್ರೆಯಲ್ಲಿ ಬೆಳಗ್ಗೆ 10ರಿಂದ ಅಪರಾಹ್ನ 1ರವರೆಗೆ ಆ.3ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ100 ಡೋಸ್ ಲಭ್ಯ ಇದೆ.
ಗ್ರಾಮೀಣ ಪ್ರದೇಶದಲ್ಲಿ ಕೋವಿಡ್-19 ಪ್ರಥಮ ಮತ್ತು 2ನೆ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆ ಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು ಎಂದು ಡಿಎಚ್ಓ ಡಾ.ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.