ಬಿ.ಸಿ.ರೋಡ್: ಹಿರಿಯ ಪತ್ರಿಕಾ ವಿತರಕ ಕಲ್ಲಡ್ಕ ಅಬ್ದುಲ್ ಖಾದರ್ ಗೆ ಸನ್ಮಾನ
ಬಿ.ಸಿ.ರೋಡ್ : ಆ.22, ಕಲ್ಲಡ್ಕ ಪರಿಸರದಲ್ಲಿ ಕಳೆದ 40 ವರ್ಷ ಗಳಿಂದ ವಿವಿಧ ಪತ್ರಿಕೆಗಳ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ.ಎ.ಪದವೀಧರ ಅಬ್ದುಲ್ ಖಾದರ್ ಅಲಿಯಾಸ್ ಮೋನುಂಙಾಕ ಅವರನ್ನು ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ವತಿಯಿಂದ ಇತ್ತೀಚೆಗೆ ಕಲ್ಲಡ್ಕದ ಕೆ.ಪದ್ಮನಾಭ ರೈ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಸತೀಶ್ ಕುಮಾರ್ ಬಿ.ಸಿ.ರೋಡ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕ್ಲಬ್ ನ ಕಾರ್ಯದರ್ಶಿ ಪಲ್ಲವಿ ಕಾರಂತ್ ರೊಟೇರಿಯನ್ ಗಳಾದ ಕೆ.ಪದ್ಮನಾಭ ರೈ, ಪ್ರಶಾಂತ್ ಕಾರಂತ್, ಅಲ್ಬರ್ಟ್ ಮಿನೇಜಸ್, ಗಣೇಶ್ ಶೆಟ್ಟಿ ಗೋಳ್ತಮಜಲು, ಸುಧೀರ್ ಶೆಟ್ಟಿ, ಚಂದ್ರಶೇಖರ ಕೋರ್ಯ, ರಮೇಶ್ ನೆಟ್ಲ, ಹಾಗೂ ಹುಸೈನ್ ಸೂರಜ್ ಮತ್ತು ಯೂಸುಫ್ ನಾರ್ಶ ಮೊದಲಾದವರು ಉಪಸ್ಥಿತರಿದ್ದರು.
Next Story