ಕಲ್ಲಡ್ಕ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ವತಿಯಿಂದ ಸನ್ಮಾನ
ಕಲ್ಲಡ್ಕ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಕಲ್ಲಡ್ಕ ವತಿಯಿಂದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕಲ್ಲಡ್ಕದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ನಡೆದ ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕ ಮೋನುಂಙಾಕ ಕಲ್ಲಡ್ಕ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಕಲ್ಲಡ್ಕ ಅಧ್ಯಕ್ಷ ಹಮೀದ್ ಅಲಿ, ಪಾಪ್ಯುಲರ್ ಫ್ರಂಟ್ ಕಲ್ಲಡ್ಕ ಡಿವಿಶನ್ ಅಧ್ಯಕ್ಷ ಅಬೂಬಕರ್ ಸಿದ್ದೀಕ್, ಬೀಡಿ ಕಾರ್ಮಿಕರ ಕಲ್ಯಾಣ ಸಂಚಾರಿ ಮತ್ತು ಸ್ಥಿರ ಆಸ್ಪತ್ರೆಯ ವೈದ್ಯೆ ಡಾ. ಆಯಿಶಾ , ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಕಲ್ಲಡ್ಕ ಗೌರವಾಧ್ಯಕ್ಷರಾದ ಇಬ್ರಾಹೀಂ ಇದ್ದಿನಬ್ಬ ಕೆ.ಎಚ್, ಬಂಟ್ವಾಳದ ವಕೀಲರು ಮತ್ತು ನೋಟರಿ ಹಬೀಬ್ ರಹ್ಮಾನ್, ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯರುಗಳಾದ ಹಾರಿಸ್ ಅಮರ್, ಇಕ್ಬಾಲ್ ಕೆ.ಸಿ.ರೋಡ್, ಯೂಸುಫ್ ಹೈದರ್, ಸುಮಯ್ಯಾ ಸಿದ್ದೀಕ್, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಕಲ್ಲಡ್ಕ ಪ್ರಧಾನ ಕಾರ್ಯದರ್ಶಿ ಕೆ.ಕೆ ಸಯೀದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.