ಆ.26: ಮಂಗಳೂರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ
ಮಂಗಳೂರು, ಆ.24: ನಗರದ 33/11 ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ಸೌತ್ ವಾರ್ಫ್ ಫೀಡರ್ನಲ್ಲಿ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರಯುಕ್ತ ಆ.26ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಹ್ಯಾಮಿಲ್ಟನ್ ಸರ್ಕಲ್, ಡಿ.ಸಿ.ಆಫೀಸ್, ಸೇಂಟ್ ಆನ್ಸ್, ಗೂಡ್ ಶೆಡ್ ರಸ್ತೆ, ಸಂಜೆವಾಣಿ, ಬದ್ರಿಯಾ ರೋಡ್, ಧಕ್ಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಮುಲ್ಕಿ/ನಂದಿಕೂರು: ನಗರದ 110/11 ಕೆವಿ ಮುಲ್ಕಿ ಹಾಗೂ ನಂದಿಕೂರು ವಿದ್ಯುತ್ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಆ.26ರಂದು ಮೆಸ್ಕಾಂನಿಂದ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮುಲ್ಕಿ, ಕೆ.ಎಸ್. ರಾವ್ ನಗರ, ಕೊಲ್ನಾಡು ಕೈಗಾರಿಕಾ ಪ್ರದೇಶ, ಬಪ್ಪನಾಡು, ಕುಬೆವೂರು, ಶಿಮಂತೂರು, ಅತಿಕಾರಿಬೆಟ್ಟು, ಕಿನ್ನಿಗೋಳಿ, ಮೂರುಕಾವೇರಿ, ಪುನರೂರು, ಐಕಳ, ದಾಮಸ್ ಕಟ್ಟೆ, ಎಸ್ಕೋಡಿ, ಪಕ್ಷಿಕೆರೆ, ಹಳೆಯಂಗಡಿ, ಇಂದಿರಾನಗರ, ತೋಕೂರು, ಪಾವಂಜೆ, ಚೇಳಾರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಕಂಡುಬರಲಿದೆ ಎಂದು ಪ್ರಕಟನೆ ತಿಳಿಸಿದೆ.