ಕಾಟಿಪಳ್ಳ: ಮಿಸ್ಬಾ ವಿಮೆನ್ಸ್ ಕಾಲೇಜು ವತಿಯಿಂದ ನಾಲ್ವರು ಸಾಧಕಿಯರಿಗೆ ಸನ್ಮಾನ
ಸುರತ್ಕಲ್ : ಕಾಟಿಪಳ್ಳದ ಮಿಸ್ಬಾ ವಿಮೆನ್ಸ್ ಕಾಲೇಜ್ ಇದರ ವತಿಯಿಂದ ಮೂವರು ವೈದ್ಯೆಯರ ಸಹಿತ ನಾಲ್ವರು ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಯು ಶನಿವಾರ ಮಿಸ್ಬಾ ವಿಮೆನ್ಸ್ ಕಾಲೇಜಿನ ಕ್ಯಾಂಪಸ್ನಲ್ಲಿ ನಡೆಯಿತು.
ಡಾ. ಶೈಮಾ ಸಯೀಮ್, ಡಾ. ಖತೀಜ ಶಿರೀನ್, ಡಾ. ಖತೀಜಾ ಸನಾ ಹಾಗೂ ಆಯಿಷಾ ಮಝೂಂ ಅವರನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ
ಸಾಧನೆಗಾಗಿ ಸನ್ಮಾನಿಸಲಾಯಿತು.
ಶಿಕ್ಷಣ ಪಡೆಯಬೇಕೆಂಬ ಹಂಬಲ, ಗುರಿಯನ್ನು ಸಾಧಿಸಬೇಕು ಎಂಬ ಛಲ, ಆತ್ಮ ವಿಶ್ವಾಸವಿದ್ದಾಗ ಏನೂ ಬೇಕಾದರೂ ಸಾಧಿಸಬಹುದು ಎಂದು ಸನ್ಮಾನಿತರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಅನಿವಾಸಿ ಉದ್ಯಮಿಗಳಾದ ಶರೀಫ್ ಜೋಕಟ್ಟೆ ಶಾರ್ಜಾ, ಎನ್. ಅಬ್ದುಲ್ ಸಮದ್, ಇಕ್ಬಾಲ್ ಜುಬೈಲ್ ಬಂಟ್ವಾಳ, ಹಾಗೂ ಉದ್ಯಮಿ ಶೌಕತ್ ಸೌರಿ ಅವರು ಮಿಸ್ಬಾ ಕಾಲೇಜಿನ ಶೈಕ್ಷಣಿಕ ಸಾಧನೆ ಹಾಗೂ ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಮ್ತಾಝ್ ಆಲಿ ಹಾಗೂ ಟ್ರಸ್ಟಿಗಳ ಪರಿಶ್ರಮವನ್ನು ಶ್ಲಾಘಿಸಿದರು.
ಅಧ್ಯಕ್ಷ ಮುಮ್ತಾಝ್ ಆಲಿ ಮಾತನಾಡಿ ಟ್ರಸ್ಟಿಗಳ, ದಾನಿಗಳ ಕೊಡುಗೆಯನ್ನು ಸ್ಮರಿಸಿಕೊಂಡರು. ಟ್ರಸ್ಟಿಗಳಾದ ಟಿ.ಎಚ್.ಮೆಹಬೂಬ್ ಜುಬೈಲ್, ಮುಹಮ್ಮದ್ ಮುಬೀನ್, ಕೆ.ಮುಹಮ್ಮದ್ ಹಾರಿಸ್, ಬಿ.ಎ ನಝೀರ್, ನಾಸಿರ್ ಲಕ್ಕಿಸ್ಟಾರ್, ಹಕೀಮ್ ಫಾಲ್ಕಾನ್, ಫಕ್ರುದ್ದೀನ್ ಬಾವಾ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಝಾಹಿದಾ ಜಲೀಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನೌಸೀನ್, ನುಬೀರಾ ಮತ್ತು ಮಮತಾ ಕಾರ್ಯಕ್ರಮ ನಿರೂಪಿಸಿದರು.