ಎಸ್ಡಿಪಿಐ ಸದಸ್ಯತ್ವ ಸ್ವೀಕಾರ ಸಮಾರಂಭ
ಕುಂದಾಪುರ, ಸೆ.11: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾಸ್ತಾನದಲ್ಲಿ ಎಸ್ಡಿಪಿಐ ಪಕ್ಷದ ಸದಸ್ಯತ್ವ ಸ್ವೀಕಾರ ಸಮಾರಂಭವು ಇತ್ತೀಚೆಗೆ ಜರಗಿತು.
ಮುಖಂಡ ಇರ್ಷಾದ್ ಸಾಸ್ತಾನ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಇಲ್ಯಾಸ್ ಸಾಸ್ತಾನ, ಜಿಲ್ಲಾ ಮುಖಂಡರಾದ ಹನೀಫ್ ಮೂಳೂರು, ಮಸೂದ್ ಸಾಸ್ತಾನ ಮೊದಲಾದವರು ಉಪಸ್ಥಿತರಿದ್ದರು.
Next Story