ಗಾಂಧೀ ಗ್ರಾಮ ಪುರಸ್ಕಾರಕ್ಕೆ ಒಟ್ಟು 7 ಗ್ರಾಮಗಳ ಆಯ್ಕೆ
ಉಡುಪಿ, ಸೆ.20: ಪ್ರಸಕ್ತ ಸಾಲಿನ ಗಾಂಧೀ ಗ್ರಾಮ ಪುರಸ್ಕಾರಕ್ಕಾಗಿ ಬಹ್ಮಾವರ ತಾಲೂಕಿನ ಹನೆಹಳ್ಳಿ, ಬೈಂದೂರಿನ ಮರವಂತೆ, ಹೆಬ್ರಿಯ ಹೆಬ್ರಿ, ಕಾಪುನ ತೆಂಕ, ಕಾರ್ಕಳದ ಕಲ್ಯಾ, ಕುಂದಾಪುರದ ಹೊಸಾಡು ಮತ್ತು ಉಡುಪಿಯ 80 ಬಡಗುಬೆಟ್ಟು ಗ್ರಾಮಗಳನ್ನು ಅಂತಿಮಗೊಳಿಸಿ ರಾಜ್ಯದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story