ವಗ್ಗ: ವಿನ್ಯಾಸ ಟೈಲರಿಂಗ್ ಸೆಂಟರ್ ಶುಭಾರಂಭ
ಮೂಡುಬಿದಿರೆ, ಸೆ 21: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ವಗ್ಗ ಮುಹಿಯುದ್ದೀನ್ ಜುಮಾ ಮಸ್ಜಿದ್ ಸಹಯೋಗದೊಂದಿಗೆ ವಿನ್ಯಾಸ ಟೈಲರಿಂಗ್ 20ನೇ ಸೆಂಟರ್ನ ಉದ್ಘಾಟನಾ ಸಮಾರಂಭವು ವಗ್ಗದ ಮಾದನುಲ್ ಮದ್ರಸದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಕಾವಳಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಜನಿ ಬಾಬು ಮೂಲ್ಯ ಉದ್ಘಾಟಿಸಿದರು. ಸರ್ಫುನ್ನಿಸಾ ಸೈಯದ್ ಸಾಂಧರ್ಬಿಕವಾಗಿ ಮಾತನಾಡಿದರು.
ಕಾವಳಪಡೂರು ಗ್ರಾಪಂ ಸದಸ್ಯರಾದ ಲೀನಾ ರೊಡ್ರಿಗಸ್, ಸಫಿಯ ಅಬ್ದುಲ್ ರಹಿಮಾನ್, ಡಾ.ಮುಶ್ರಿಫ ಅಬ್ದುಲ್ ಲತೀಫ್ ಹಾಗೂ ಸಹನಾ ಕೌನ್ಸಿಲಿಂಗ್ ಸೆಂಟರ್ ಕೌನ್ಸಿಲರ್ ಖೈರುನ್ನೀಸಾ ಸಯ್ಯದ್ ಉಪಸ್ಥಿತರಿದ್ದರು,
ಸಲ್ಮಾ ಉಮರ್ ಪುತ್ತಿಗೆ ಕಿರಾಅತ್ ಪಠಿಸಿದರು. ಮುಮ್ತಾಝ್ ಪಕಲಡ್ಕ ಸ್ವಾಗತಿಸಿ ಪ್ರಸ್ತಾವನೆಗೈದರು.