ಹಂದಿ ದಾಳಿ: ಗಾಯಾಳು ಮಹಿಳೆ ಮೃತ್ಯು
ಕೋಟ, ಅ.6: ಕಾಡು ಹಂದಿ ದಾಳಿ ಮಾಡಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವಡ್ಡರ್ಸೆ ಗ್ರಾಮದ ಕುದ್ರುಮನೆ ಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಕುದ್ರುಮನೆ ಬೆಟ್ಟು ನಿವಾಸಿ ಕಮಲ ದೇವಾಡ್ತಿ (80) ಎಂದು ಗುರುತಿಸಲಾಗಿದೆ.
ಇವರು ಸೆ.19ರಂದು ಬೆಳಿಗ್ಗೆ ಮನೆ ಸಮೀಪದ ಗದ್ದೆ ಹೋಗಿದ್ದು, ಅಲ್ಲಿ ಹಂದಿಯೊಂದು ಕಮಲ ಅವರಿಗೆ ಮೇಲೆ ದಾಳಿ ಮಾಡಿ ರಕ್ತಗಾಯ ಮಾಡಿತ್ತೆನ್ನಲಾಗಿದೆ. ಈ ಬಗ್ಗೆ ಚಿಕಿತ್ಸೆ ಪಡೆದು ನಂತರ ಮನೆಯಲ್ಲಿ ವಿಶ್ರಾಂತಿ ಯಲ್ಲಿದ್ದ ಕಮಲ, ಅ.6ರಂದು ಬೆಳಿಗ್ಗೆ 8ಗಂಟೆಗೆ ಹಂದಿ ಗುದ್ದಿ ಸೊಂಟಕ್ಕೆ ಆದ ಗಾಯದ ತೀವ್ರತೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story