ಮಂಗಳೂರು: ಇಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಶೋರೂಂ ಉದ್ಘಾಟನೆ
ಮಂಗಳೂರು, ಅ.16: ಮಂಗಳೂರು ವೀಲ್ಸ್ನವರ ನೂತನ ಇಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಶೋರೂಂ ಅನ್ನು ಇಂದು ಕನ್ನಡ ಮತ್ತು ಸಂಸ್ಕೃತಿ ಮತ್ತು ಇಂಧನ ಸಚಿವ ವಿ. ಸುನೀಲ್ ಕುಮಾರ್ ನಗರದ ಪಂಪ್ವೆಲ್ ಬಳಿ ಉದ್ಘಾಟಿಸಿದರು.
ಈ ಸಂದರ್ಭ ಅವರು 20 ಅಟೋ ಮತ್ತು ತ್ರಿಚಕ್ರ ಇಲೆಕ್ಟ್ರಿಕ್ ವಾಹನಗಳ ಕೀ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ನ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಅಮಿತ್ ಸಿಂಗ್, ನೂತನ ಆಪೆ ಇಲೆಕ್ಟ್ರಿಕ್ ವಾಹನಗಳ ಬಗ್ಗೆ ವಿವರ ನೀಡಿದರು.
ಕೇಶವ ಮರೋಳಿ, ಸುದರ್ಶನ ಮೂಡಬಿದ್ರೆ, ರಾಮಚಂದರ್ ಬೈಕಂಪಾಡಿ, ವಿಜಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕುಮಾರ್ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವೀಲ್ಸ್ನ ಆಡಳಿತ ನಿರ್ದೇಶಕ ಮುಕೇಶ್ ಮಲ್ಪೆ ವಂದಿಸಿದರು.