ಮನೆಗೆ ನುಗ್ಗಿ ನಗನಗದು ಕಳವು
ಹೆಬ್ರಿ, ಅ.19: ವರಂಗ ಎಂಬಲ್ಲಿ ಅ.18ರಂದು ರಾತ್ರಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಉಮೇಶ ನಾಯ್ಕ ಎಂಬವರು ಮನೆಯ ಹಿಂದಿನ ಬಾಗಿಲಿನ ಮರದ ಚಿಲಕವನ್ನು ಮುರಿದು ಒಳನುಗ್ಗಿದ ಕಳ್ಳರು, ಗ್ರೋಡೇಜ್ ನಲ್ಲಿರಿಸಿದ 1.40 ಲಕ್ಷ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story