ವಕ್ಫ್ ಸಂಸ್ಥೆಗಳು ಆಯವ್ಯಯ ಪಟ್ಟಿ ಸಲ್ಲಿಸಲು ಸೂಚನೆ
ಉಡುಪಿ, ಅ.20: ಜಿಲ್ಲೆಯ ಎಲ್ಲಾ ನೋಂದಣಿಯಾದ ವಕ್ಫ್ ಸಂಸ್ಥೆಗಳು 2020-21ನೇ ಸಾಲಿನ ಆಯ-ವ್ಯಯ (ಜಮಾ ಖರ್ಚು) ನಿಗದಿತ ನಮೂನೆ ಯಲ್ಲಿ ಪ್ರತಿ ವರ್ಷ ಜುಲೈ ತಿಂಗಳ 1ನೇ ತಾರೀಕಿನೊಳಗೆ ಸಲ್ಲಿಸಬೇಕಾಗಿದೆ. ಆದರೆ ಸಂಸ್ಥೆಗಳು ಈವರೆಗೂ ಸಲ್ಲಿಸಿರುವುದಿಲ್ಲ. ಆದುದರಿಂದ ಮೂರು ದಿನಗಳೊಳಗೆ 2020-21 ನೇ ಸಾಲಿನ ಆಯ-ವ್ಯಯ ದ್ವಿಪ್ರತಿಯಲ್ಲಿ ಸಲ್ಲಿಸಬೇಕು ಎಂದು ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story