‘ಮಾಮ್’ ಫೇಸ್ಬುಕ್ ಗುಂಪಿನಿಂದ 'ಪಿಂಕ್ ವಾಕ್'
ಮಂಗಳೂರು, ಅ.21: ಈ ವರ್ಷದ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳ ಗೌರವಾರ್ಥವಾಗಿ, ಮಂಗಳೂರಿನ 37,000 ಮಂದಿ ತಾಯಂದಿರನ್ನು ಹೊಂದಿರುವ ‘ಮಾಮ್’ (MOM ) ಹೆಸರಿನ ಫೇಸ್ಬುಕ್ ಗುಂಪು 'ಮೋಮ್ ಪಿಂಕ್ ವಾಕ್' ಎಂಬ ವಿಶೇಷ ಜಾಗೃತಿ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಿದೆ.
ಕ್ಯಾನ್ಸರ್ ರೋಗಿಗಳಿಗೆ ಬೆಂಬಲ, ಇದನ್ನು ಗೆದ್ದು ಬಂದವರನ್ನು ಸನ್ಮಾನಿಸುವುದು ಮತ್ತು ದಾನಿಗಳನ್ನು ಗೌರವಿಸುವ ಧ್ಯೇಯದೊಂದಿಗೆ ನಡೆಯುವ ಈ ಜಾಗೃತಿ ಕಾರ್ಯಕ್ರಮ ಅ. 31ರಂದು ಈ ನಡಿಗೆ ನಡೆಯಲಿದೆ.
ನಗರದ ಭಾರತ್ ಮಾಲ್ನ ಡೆಕಾಥ್ಲಾನ್- ಕದ್ರಿ ಪಾರ್ಕ್- ಡೆಕಾಥ್ಲಾನ್ ವರೆಗಿನ ಈ ನಡಿಗೆ ಅಂದು ಬೆಳಗ್ಗೆ 7ರಿಂದ 9 ಗಂಟೆಯವರೆಗೆ ನಡೆಯಲಿದೆ. 250 ರೂ.ಗಳೊಂದಿಗೆ ರಾಧಿಕಾ (ಮೊ.-91 9916388626) ಎಂಬವರಲ್ಲಿ ಅ. 24ರೊಳಗೆ ಹೆಸರು ನೋಂದಾಯಿಸಬಹುದಾಗಿದೆ. ನೋಂದಣಿ ಮಾಡಿದವರಿಗೆ ಪಿಂಕ್ ವಾಕ್ ಟಿ ಶರ್ಟ್, ಫಿನಿಶರ್ ಪದಕ ಹಾಗೂ ನಡಿಗೆಯನ್ನು ಪೂರ್ಣಗೊಳಿಸಿದವರು ಪ್ರಮಾಣ ಪತ್ರವನ್ನು ಪಡೆಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story