ಹೊಟೇಲ್ ಕಟ್ಟಡದಲ್ಲಿದ್ದ ಸೊತ್ತುಗಳು ಕಳವು
ಕೊಲ್ಲೂರು, ನ.9: ಹೊಟೇಲ್ ಕಟ್ಟಡದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ನ.8ರಂದು ಕಳವಾಗಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ್ಲೂರಿನ ಶಕೀಲಾ ಶೆಟ್ಟಿ ಎಂಬವರಿಗೆ ಸೇರಿದ ಹೊಸೂರು ಗ್ರಾಮದಲ್ಲಿರುವ ಕೆಎಸ್ಎಸ್ ಹೋಟೆಲ್ ಮತ್ತು ಲಾಡ್ಜಿಂಗ್ ಕಟ್ಟಡ ದಲ್ಲಿದ್ದ ಪ್ರೀಜ್, ಎಲ್ಲಾ ರೀತಿ ಅಡುಗೆ ಸಲಕರಣೆಗಳು, ಗ್ರೇಂಡರ್, ಡೋರ್, ಬಾರ್ ಕ್ಯಾಬಿನೇಟ್, ಕಿಚನ್ ಕ್ಯಾಬಿನೆಟ್, ಫ್ಯಾನ್ಸ್, ಕಾಟ್, ವಾಸ್ ಬೇಸಿನ್, ಎಲೆಕ್ಟ್ರಿಕ್ ಐಟಮ್, ಸಿಸಿ ಟಿವಿ, ಡಿವಿಆರ್, ಟೇಬಲ್, ಚೇರ್, ಕ್ರೊಕೇರಿ ಐಟಮ್ ಸೇರಿದಂತೆ ಸುಮಾರು 30 ಲಕ್ಷ ಮೌಲ್ಯ ಸಾಮಗ್ರಿಗಳನ್ನು ಆರೋಪಿಗಳಾದ ಪ್ರದೀಪ ಶೆಟ್ಟಿ , ಸುನೀಲ್ ನಾಯ್ಕ್, ಕೃಷ್ಣಯ್ಯ ಶೆಟ್ಟಿ, ಅಲೇಕ್ಸ್, ಅಬ್ದುಲ್ ಹಾಗೂ ಸುರೇಶ್ ಎಂಬವರು ಸೇರಿ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story