ಉಡುಪಿ: ಏರುತ್ತಿರುವ ಕೊರೋನ ಸೋಂಕಿತರ ಸಂಖ್ಯೆ
ಉಡುಪಿ, ನ.25: ಕಳೆದ ಮೂರು ದಿನಗಳಲ್ಲಿ ಸತತವಾಗಿ ಜಿಲ್ಲೆಯಲ್ಲಿ ಹೊಸತಾಗಿ ಕೋವಿಡ್ಗೆ ಪಾಸಿಟಿವ್ ಬರುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಎರಡು ದಿನಗಳ ಹಿಂದೆ ಮೂರು ಇದ್ದ ಸೋಂಕಿತರ ಸಂಖ್ಯೆ ನಿನ್ನೆ 8ಕ್ಕೆ ಹಾಗೂ ಇಂದು 13ಕ್ಕೇರಿದೆ. ದಿನದಲ್ಲಿ ಏಳು ಮಂದಿ ಗುಣಮುಖ ರಾದರೆ, 57 ಮಂದಿ ಇನ್ನೂ ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಬುಧವಾರ ಸೋಂಕಿನಿಂದ ಏಳು ಮಂದಿ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 76,320ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 930 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 76,853ಕ್ಕೇರಿದೆ.
Next Story