ಮಂಗಳೂರು: ಬಾಲ ಮಂದಿರದಿಂದ ಇಬ್ಬರು ಬಾಲಕರು ನಾಪತ್ತೆ
ಮಂಗಳೂರು, ನ. 29: ನಗರದ ಬೋಂದೆಲ್ನಲ್ಲಿರುವ ಬಾಲಕರ ಬಾಲ ಮಂದಿರದಿಂದ ರವಿವಾರ ಮುಂಜಾನೆ ಶ್ಯಾಮವೆಲ್ ಟೊಪ್ಪು (16) ಮತ್ತು ವಡಲಮನಿ ಚಿರಂಜೀವ (16) ಎಂಬವರು ನಾಪತ್ತೆಯಾದ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಯಾಮುವೆಲ್ 150 ಸೆಂ.ಮೀ ಎತ್ತರವಿದ್ದು, ಬಿಳಿ ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಎದುರಿನಲ್ಲಿ ಹಳದಿ ಬಣ್ಣದ ಪಟ್ಟಿ ಇರುವ ತಿಳಿನೀಲಿ ಬಣ್ಣದ ಟೀಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ.
ವಡಲಮನಿ ಚಿರಂಜೀವಿ 150 ಸೆಂ.ಮೀ ಎತ್ತರವಿದ್ದು ಎಣ್ಣೆಗಪ್ಪು ಮೈಬಣ್ಣ, ದುಂಡು ಮುಖ, ಸದೃಢ ಮೈಕಟ್ಟು ಹೊಂದಿದ್ದಾನೆ. ಬಿಳಿ ಬಣ್ಣದ ಉದ್ದ ತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ.
ಮಾಹಿತಿ ಸಿಕ್ಕವರು ಕಾವೂರು ಪೊಲೀಸ್ ಠಾಣೆ (0824-2220533)ಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Next Story