ಕಲ್ಲುಕೋರೆಯಲ್ಲಿ ಸ್ಫೋಟ: ಇಬ್ಬರು ಕಾರ್ಮಿಕರಿಗೆ ಗಾಯ
ಕಾರ್ಕಳ : ತಾಲೂಕಿನ ಜಾರ್ಕಳ ಬಳಿಯಿರುವ ಕಲ್ಲುಕೋರೆಯೊಂದರಲ್ಲಿ ಸ್ಫೋಟ ಉಂಟಾದ ಪರಿಣಾಮ ಅಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕರಿಬ್ಬರು ಗಾಯಗೊಂಡ ಸೋಮವಾರ ನಡೆದಿದೆ.
ಕ್ರಶರ್ ಅನ್ನು ಲೀಸ್ ಪಡೆದುಕೊಂಡು ಖಾಸಗಿಯಾಗಿ ನಡೆಸಲಾಗುತಿತ್ತು. ಮಂಗಳವಾರ ಕಾರ್ಮಿಕರು ಘಟಕದಲ್ಲಿ ಕಾರ್ಯ ನಿರ್ವಹಿಸುತಿದ್ದರು. ಈ ವೇಳೆ ಸ್ಪೋಟ ಉಂಟಾದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.
Next Story