ವಿದ್ಯಾರ್ಥಿನಿ ನಾಪತ್ತೆ
ಮಂಗಳೂರು,ಡಿ.1: ನಗರದ ಬೆಸೆಂಟ್ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕ (19) ಎಂಬಾಕೆ ಕಾಲೇಜಿನಿಂದ ನಾಪತ್ತೆಯಾದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.27ರಂದು ಬೆಳಗ್ಗೆ ಮನೆಯಿಂದ ಸಹೋದರನ ಜೊತೆ ತೆರಳಿದ್ದ ಪ್ರಿಯಾಂಕ ಬಳಿಕ ನಾಪತ್ತೆಯಾಗಿದ್ದಾಳೆ. ಸಹೋದರ ಬೆಳಗ್ಗೆ ಕಾಲೇಜಿಗೆ ಬಿಟ್ಟು ಮಧ್ಯಾಹ್ನ ಮತ್ತೆ ಕರೆ ತರಲು ಹೋದಾಗ ಪ್ರಿಯಾಂಕ ಕಾಲೇಜಿನಲ್ಲಿ ಇಲ್ಲದೇ ಇದ್ದು, ಮನೆಗೂ ಬಾರದೆ ನಾಪತ್ತೆಯಾಗಿದ್ದಾಳೆ.
ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಮುಖದ ಬಲ ಬದಿಯಲ್ಲಿ ಎಳ್ಳು ಗಾತ್ರದ ಮಚ್ಚೆ ಇದೆ. ಮನೆಯಿಂದ ಹೊರಟಾಗ ಚುಕ್ಕೆಗಳಿರುವ ಬಿಳಿ ನೀಲಿ ಮಿಶ್ರಿತ ಚೂಡಿದಾರ್ ಟಾಪ್ ಹಾಗು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾಳೆ. ಕನ್ನಡ, ಇಂಗ್ಲಿಷ್, ತುಳು, ಹಿಂದಿ, ಕೊಂಕಣಿ ಭಾಷೆ ಮಾತನಾಡುತ್ತಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Next Story