ಪುತ್ತೂರು: ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
ಪುತ್ತೂರು, ಡಿ.3: ವಿವಾಹಿತ ಮಹಿಳೆಯೊಬ್ಬರು ಗುರುವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದಾರಂದಕುಕ್ಕು ಎಂಬಲ್ಲಿ ಗುರುವಾರ ನಡೆದಿರುವುದು ವರದಿಯಾಗಿದೆ.
ಪುತ್ತೂರಿನ ಕಾಮತ್ ಸ್ವೀಟ್ಸ್ ನಲ್ಲಿ ಉದ್ಯೋಗದಲ್ಲಿರುವ ಭಾಸ್ಕರ್ ಪ್ರಭು ಎಂಬವರ ಪತ್ನಿ ಆಶಿಕಾ(20) ಆತ್ಮಹತ್ಯೆ ಮಾಡಿಕೊಂಡವರು.
ಮೃತರು ಪತಿ, 7 ತಿಂಗಳ ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಆಶಿಕಾ ಚಿಕ್ಕ ವಯಸ್ಸಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದರು. ವಿವಾಹದ ಬಳಿಕವೂ ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story