ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆ
ಉಡುಪಿ, ಡಿ.7: ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ನ.11ರಿಂದ ಪೂರ್ವಾನ್ವಯವಾಗುವಂತೆ ಖಾಸಗಿ ಏಕ್ಸ್ಪ್ರೆಸ್ ಹಾಗೂ ಶಟಲ್ ಬಸ್ಗಳ ಪ್ರಯಾಣ ದರವನ್ನು ಏರಿಕೆ ಮಾಡಿದ್ದು, ನಿಗದಿಪಡಿಸಿದ ಪರಿಷ್ಕೃತ ದರವನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ.
ಉಡುಪಿ ಜಿಲ್ಲೆಯಾದ್ಯಂತ ಎಲ್ಲಾ ಬಸ್ಸುಗಳ ಮಾಲಕರು ಪ್ರಾಧಿಕಾರದಿಂದ ನಿಗದಿಪಡಿಸಿದ ಪರಿಷ್ಕೃತ ದರವನ್ನು ಪ್ರಯಾಣಿಕರಿಂದ ಪಡೆಯುವಂತೆ, ಜಿಲ್ಲೆಯ ಎಲ್ಲಾ ಬಸ್ಸುಗಳಲ್ಲಿ ಮಾರ್ಗದ ವಿವರವನ್ನು ಕಡ್ಡಾಯವಾಗಿ ಕನ್ನಡದಲ್ಲಿ ನಮೂದಿಸುವಂತೆ ಹಾಗೂ ಎಲ್ಲಾ ಬಸ್ಸುಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ, ಬಸ್ಸುಗಳ ಚಾಲಕರು, ನಿರ್ವಾಹಕರು ಸಾರ್ವಜನಿಕರೊಂದಿಗೆ ಸೌಹಾರ್ದತೆ, ಸೌಜನ್ಯದಿಂದ ವರ್ತಿಸುವಂತೆ ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಆರ್ಟಿಓ ಜೆ.ಪಿ.ಗಂಗಾಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಕ್ಸ್ಪ್ರೆಸ್ ಮತ್ತು ಸರ್ವಿಸ್ ಬಸ್ಗಳ ಪರಿಷ್ಕೃತ ದರ ಕೆಳಕಂಡಂತಿದೆ.
ದೂರ ಕಿ.ಮೀ.ಗಳಲ್ಲಿ ಎಕ್ಸ್ಪ್ರೆಸ್- ಸರ್ವಿಸ್ ಬಸ್ಗಳ ಪರಿಷ್ಕೃತ ದರ