ಉಡುಪಿ: ಮಹಿಳೆಯ ಮೊಬೈಲ್ ಸುಲಿಗೆ
ಉಡುಪಿ, ಡಿ.24: ಅಪರಿಚಿತರಿಬ್ಬರು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕೈಯಲ್ಲಿದ್ದ ಮೊಬೈಲ್ ಸುಲಿಗೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಡಿ.23ರಂದು ಸಂಜೆ 6.40ರ ಸುಮಾರಿಗೆ ಉಡುಪಿ ಎಂಜಿಎಂ ಕಾಲೇಜು ಬಳಿ ನಡೆದಿದೆ.
ಶಿವಳ್ಳಿ ಗ್ರಾಮದ ಮಲೆಜುಮಾದಿ ದೇವಸ್ಥಾನದ ಬಳಿ ನಿವಾಸಿ ಹೊನ್ನಾವರ ಮೂಲದ ನಾಗವೇಣಿ(30) ಎಂಬವರು ಕೆಲಸ ಮುಗಿಸಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಹೊಂಡಾ ಆ್ಯಕ್ಟೀವಾ ಡಿಯೊ ಸ್ಕೂಟರ್ನಲ್ಲಿ ಬಂದ ಇಬ್ಬರು ಅಪರಿಚಿತರು, ನಾಗವೇಣಿ ಕೈಯಲ್ಲಿದ್ದ 4ಸಾವಿರ ರೂ. ಮೌಲ್ಯದ ಮೊಬೈಲ್ ಅನ್ನು ಸುಲಿಗೆ ಮಾಡಿಕೊಂಡು ಮಣಿಪಾಲ ಕಡೆಗೆ ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story