ವಿಟ್ಲ; ಹೊರೈಝನ್ ಶಾಲೆ ಶಿಕ್ಷಕ ರಕ್ಷಕ ಸಭೆ
ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಶಾಲೆಯ ಶಿಕ್ಷಕ - ರಕ್ಷಕ ಸಭೆಯು ಶಾಲಾ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ಭಾಗವಹಿಸಿಧ್ದರು.
ಮಸೀದಿಯ ಅಧ್ಯಕ್ಷ ಇಕ್ಬಾಲ್ ಶೀತಲ್, ಶಾಲೆಯ ಸಂಚಾಲಕ ನೊಟರಿ ಅಬೂಬಕರ್, ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಕಾರ್ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಜತೆ ಕಾರ್ಯದರ್ಶಿ ಹನೀಪ್ ಎಂ.ಎ., ಮೇಲ್ವಿಚಾರಕ ವಿ.ಕೆ.ಎಂ.ಅಶ್ರಫ್, ನಿಕಟಪೂರ್ವ ಅಧ್ಯಕ್ಷ ಶೇಖ್ ಆದಂ ಸಾಹೇಬ್, ಸಿದ್ದೀಕ್ ಮಾಲಮೂಲೆ, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ ಹಾಗೂ ಶಾಲಾ ಪ್ರಾಂಶುಪಾಲರಾದ ಮನಾಝಿರ್ ಮುಡಿಪು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿಯರಾದ ಫಾತಿಮಾ ಸ್ವಾಗತಿಸಿದರು. ಲಿಖಿತಾ ವಂದಿಸಿದರು. ಹಿತಶ್ರೀ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಗಾಯತ್ರಿ, ಫರ್ಝಾನ ಉಪಸ್ಥಿತರಿದ್ದರು.
Next Story