ಕಿನ್ನಿಗೋಳಿ ಪಟ್ಟಣ ಪಂಚಾಯತ್: ಕರುಡು ಅಧಿಸೂಚನೆ ಪ್ರಕಟ
ಮಂಗಳೂರು, ಜ.27: ಕಿನ್ನಿಗೋಳಿ ಪಟ್ಟಣ ಪಂಚಾಯತ್ನ ನಿಗದಿಪಡಿಸಿದ 18 ವಾರ್ಡ್ಗಳಿಗೆ ಕ್ಷೇತ್ರ ವಿಂಗಡ ನೆಯ ಕರಡು ಅಧಿಸೂಚನೆಯನ್ನು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಪ್ರಕಟಿಸಿದ್ದಾರೆ.
ಕ್ಷೇತ್ರ ವಿಂಗಡಣೆಯ ಕುರಿತು ಸಾರ್ವಜನಿಕರು ಆಕ್ಷೇಪಣೆ/ಸಲಹೆ ಸೂಚನೆಗಳಿದ್ದಲ್ಲಿ ಲಿಖಿತ ಅಥವಾ ನೇರವಾಗಿ ತಹಶೀಲ್ದಾರರ ಮುಖಾಂತರ ಈ ಕರಡು ಅಧಿಸೂಚನೆ ಪ್ರಕಟವಾದ 15 ದಿನದೊಳಗೆ ಸಲ್ಲಿಸಬಹುದಾಗಿದೆ.
ಸ್ವೀಕೃತವಾದ ಎಲ್ಲಾ ಆಕ್ಷೇಪಣೆಗಳನ್ನು ಕರ್ನಾಟಕ ಪುರಸಭೆಗಳ ಕಾಯ್ದೆ 1964 ಮತ್ತು ಸರಕಾರಿ ಆದೇಶಗಳ ಮಾರ್ಗಸೂಚಿಯನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.
Next Story