ಮಂಗಳೂರು: ಯುವತಿ ನಾಪತ್ತೆ
ಮಂಗಳೂರು, ಫೆ.14:ನಗರದ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಕೋರ್ಸ್ ಮಾಡುತ್ತಿದ್ದ ಕೊಡಗಿನ ಸೋಮವಾರಪೇಟೆಯ ನಿವಾಸಿ ಮೇಘಶ್ರೀ (20) ಎಂಬಾಕೆ ನಾಪತ್ತೆಯಾಗಿದ್ದಾರೆ.
ಈಕೆ ನಗರದ ಹಾಸ್ಟೆಲ್ನಲ್ಲಿ ತಂಗುತ್ತಿದ್ದು ಫೆ.11ರಂದು ಬೆಳಗ್ಗೆ 6:50ಕ್ಕೆ ಹಾಸ್ಟೆಲ್ನಿಂದ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ ಎಂದು ಕದ್ರಿ ಠಾಣೆಗೆ ದೂರು ನೀಡಲಾಗಿದೆ.
ಬಿಳಿ ಮೈಬಣ್ಣ, ಸಾಧಾರಣ ಶರೀರ ಹೊಂದಿರುವ ಈಕೆ 4.4 ಅಡಿ ಎತ್ತರವಿದ್ದಾರೆ. ತುಳು, ಕನ್ನಡ, ಇಂಗ್ಲಿಷ್, ಮಲಯಾಳಂ ಭಾಷೆ ಮಾತನಾಡುತ್ತಾೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story