ನಿಟ್ಟೆ ಉಷಾ ಇನ್ಸ್ ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್: ಅರ್ಹ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನ
ಕೊಣಾಜೆ, ಜೂ.26: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ತನ್ನ ಅಂಗಸಂಸ್ಥೆಯಾದ ನಿಟ್ಟೆ ಉಷಾ ಇನ್ಸ್ ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ನಲ್ಲಿ 2022-23 ನೇ ಸಾಲಿನಲ್ಲಿ ಎಂಎಸ್ಸಿ ಕಲಿಯಲು ಬಯಸುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಘೋಷಿಸಿದೆ.
ಬಿಎಸ್ಸಿ ನರ್ಸಿಂಗ್ ಪರೀಕ್ಷೆಯಲ್ಲಿ 80%ಗಿಂತ ಹೆಚ್ಚು ಅಂಕ ಪಡೆದಿರುವವರಿಗೆ ಅವರ ಶುಲ್ಕದಲ್ಲಿ 50 % ವಿನಾಯಿತಿ,
70%ರಿಂದ 80% ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ 40% ಶುಲ್ಕ ವಿನಾಯಿತಿ, 60%ರಿಂದ 70% ಅಂಕ ಗಳಿಸಿದವರಿಗೆ 30% ಶುಲ್ಕ ವಿನಾಯಿತಿ ನೀಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು http://apply.nitte.edu.in/ ಅನ್ನು ಸಂದರ್ಶಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story