ಮಹಿಳಾ ಸಹಾಯವಾಣಿ ಯೋಜನೆ ಕಾರ್ಯಾರಂಭ
ಉಡುಪಿ : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಡಿಯಲ್ಲಿ ಬರುವ ಸಾಂತ್ವನ ಮಹಿಳಾ ಸಹಾಯವಾಣಿ ಯೋಜನೆ ಕಾರ್ಯಾರಂಭಗೊಂಡಿದ್ದು, ಪ್ರಸ್ತುತ ನಗರದ ಬನ್ನಂಜೆ ಹಳೇ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಕಾರ್ಯನಿರ್ವಸುತ್ತಿದೆ.
ಈ ಯೋಜನೆಯಡಿ ಮಹಿಳೆಯರ ಮೇಲಾಗುವ ದೌರ್ಜನ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಆಪ್ತ ಸಮಾಲೋಚನೆ ಹಾಗೂ ಕಾನೂನು ಸಲಹೆಗಳ ಮೂಲಕ ಬಗೆಹರಿಸಲಾಗುವುದು. ಈ ಯೋಜನೆಯ ಸದುಪಯೋಗ ಪಡೆದು ಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.
Next Story