ಮಂಜೇಶ್ವರ | ಸರಕಾರಿ ಬಸ್ಸಿಗೆ ಕಲ್ಲೆಸೆತ: ಚಾಲಕನಿಗೆ ಗಾಯ
ಕಾಸರಗೋಡು, ಸೆ.23: ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದರ ಮೇಲೆ ಕಿಡಿಗೇಡಿಗಳು ಇಂದು ಮುಂಜಾನೆ ಮಂಜೇಶ್ವರ ಬಳಿ ಕಲ್ಲೆಸೆದ ಘಟನೆ ನಡೆದಿದ್ದು, ಚಾಲಕ ಗಾಯಗೊಂಡಿದ್ದಾರೆ.
ಬಸ್ ಚಾಲಕ ಎನ್.ಶಿಬು(44) ಎಂಬವರು ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಬೈಕಿನಲ್ಲಿ ಬಂದ ತಂಡ ಈ ಕೃತ್ಯ ಎಸಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story