ಎಸ್ಸೆಸೆಫ್ ಮೇಲಂಗಡಿ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ
ಮಂಗಳೂರು, ಆ.10: ಎಸ್ಸೆಸೆಫ್ ಮೇಲಂಗಡಿ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಸಂಘಟನೆಯ ಕಚೇರಿಯಲ್ಲಿ ನಡೆಯಿತು.
ಅಬ್ದುಸ್ಸಮದ್ ಮೇಲಂಗಡಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಸ್ಸಮದ್ ಮೇಲಂಗಡಿ, ಉಪಾಧ್ಯಕ್ಷರಾಗಿ ನವಾಝ್ ಮತ್ತು ಇಮ್ರಾನ್, ಪ್ರಧಾನ ಕಾರ್ಯದರ್ಶಿಯಾಗಿ ಹುಸೈನ್ ಶಫೀಕ್, ಜೊತೆ ಕಾರ್ಯದರ್ಶಿಯಾಗಿ ತಸ್ರೀಫ್ ಮತ್ತು ಮೆಹರ್ ಅಲಿ, ಕೋಶಾಧಿಕಾರಿಯಾಗಿ ಶಾಹುಲ್ ಹಮೀದ್, ಸಂಚಾಲಕರಾಗಿ ಅಬ್ದುಲ್ ಖಾದರ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಸತ್ತಾರ್, ಅಬ್ದುಲ್ ಖಲೀಲ್ ಯು.ಎಂ., ಝಿಯಾದ್, ಸಿರಾಜ್, ಅಕ್ಬರ್, ಅಶ್ಫಾಕ್ ಮತ್ತು ಶಿಹಾಬ್ರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story